Friday 15 March 2013

ಅಕ್ಷರ ರೂಪ




ಪೇಟೆಯಿಂದ ಹಳ್ಳಿಯ ಮನೆಗೆ ಬಂದಿದ್ದ ಮಗಳ ಮಗನನ್ನು .. ಮನೆಯಲ್ಲೇ ಇದ್ದ ಮಗನ ಮಗನನ್ನು ಜೊತೆಯಲ್ಲಿ ಕರೆದುಕೊಂಡು ತೋಟಕ್ಕೆ ಸುತ್ತಾಡಿ ಬರಲು ಹೊರಟ.... ಮಗಳ ಮಗನ ಮೇಲೆ ಸ್ವಲ್ಪ ಪ್ರೀತಿ ಹೆಚ್ಚಿದ್ದ ಕಾರಣ ಅಜ್ಜ ಮಗಳ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು.. ಮಗನ ಮಗನನ್ನು ಕೈ ಹಿಡಿದು ನಡೆಸಿಕೊಂಡು ಹೊರಟ....
ತೋಟದ ಒಂದು ಭಾಗದಲ್ಲಿ ಬೇರೆ ತೋಟದ ಒಂದು ಹಸು ಮುಳ್ಳಿನ ಬೇಲಿ ದಾಟಿ ಹೊಲದಲ್ಲಿ ಗಿಡ ಮೇಯುತಿತ್ತು.... ಅದನ್ನು ನೋಡಿದ ಹೆಗಲ ಮೇಲಿದ್ದ ಮಗಳ ಮಗ "ತಾತ ನಿಮ್ಮ ಹೊಲದಲ್ಲಿ ಯಾವ್ದೋ ಬೇರೆ ಹಸು ಬಂದಿದೆ......" ಅಂತ ಕೂಗ್ತಾನೆ...
ಅದೇ ಸಮಯಕ್ಕೆ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು ನಡೆದು ಬರುತಿದ್ದ ಮಗನ ಮಗ "ತಾತ ನಮ್ಮ ಹೊಲದಲ್ಲಿ ಯಾವ್ದೋ ಬೇರೆ ಹಸು ಬಂದಿದೆ...." ಅಂತ ಕೂಗ್ತಾನೆ....
ತಕ್ಷಣ ಅಜ್ಜ ಮಗಳ ಮಗನನ್ನು ಕೆಳಗೆ ಇಳಿಸಿ ಮಗನ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಮುಂದೆ ಸಾಗಿದ...

2 comments:

  1. "ನಾನು"ದಿಂದ "ನಾವು"ದರೆಡೆಗೆ...."ನನ್ನದು" ಎಂಬುದರಿಂದ "ನಮ್ಮದು" ಎಂಬುದರೆಡೆಗೆ...
    ಇಷ್ಟವಾಯಿತು ಬರಹ....

    ReplyDelete