Thursday, 18 April 2013

ಹ(ಹಾ)ಳೆ ಬರಹಗಳು

ಹೊಸ ಹಾದಿಯಲ್ಲಿ 
ನವಚೈತನ್ಯಕ್ಕಾಗಿ
ಹುಡುಕುತ್ತಾ ಹೊರಟವಳಿಗೆ 
ಹಳೆಯವೆ ಹೊಸತಾಗಿ ಸ್ವಾಗತಿಸಿತ್ತು... !!ಅವಳ ನೆನಪು ಮರೆತು ಮಲಗಲು 
ಫ್ಯಾನ್ ಹಾಕಿದೆ
ಅವಳೇ ಗಿರಕಿ ಹೊಡೆದು ಕಾಡಿದಳು 
ಕನಸಿನ ಲೋಕದಲ್ಲಿ ..........ಸ್ವಾರ್ಥತೆ ಇರಬೇಕು 
ತನಗೆ ಗೊತ್ತಿದ್ದು.... ಮತ್ತೊಬ್ಬರಿಗೆ ಗೊತ್ತಾಗದಂತೆ..
ಪ್ರೀತಿ ಇರಬೇಕು 
ತನಗರಿವಿಲ್ಲದಂತೆ ಮತ್ತೊಬ್ಬರ ಹೃದಯದಲ್ಲಿ ಸ್ಥಾನ ಪಡೆಯುವಂತೆ 
ಸ್ನೇಹ ಇರಬೇಕು 
ನೋಡಿದವರಿಗೆ ಸ್ನೇಹಸಂಗಮ ಅದ್ಭುತವೆನಿಸುವಂತೆ .........ನನ್ನವರೆನ್ನುವವರಿಲ್ಲ 
ಈ ಜಗದಲಿ 
ಕಳೆದಿಹೆ ಎಲ್ಲರನು 
ಹುಡುಕುತ್ತಾ ಹೊರಟಿಹೆನು 
ಹಿಡಿದ ಹಾದಿಯು 
ತುಂಬಿತ್ತು ಕಣ್ಣೀರ ಸ್ವಾಗತದಲಿಯಾವ ತಪ್ಪಿಗಾಗಿ ಶಿಕ್ಷೆ ..!!!
ಕಪ್ಪು ಬಣ್ಣದ ಚರ್ಮಕ್ಕೋ?
ಸ್ವಸ್ಥ ಮನಸ್ಸಿನ ಕೆಲಸಕ್ಕೋ??ಪುಟಾಣಿ ಹೆಜ್ಜೆಗಳು ಮೂಡುವವು 
ನೀರಿನ ಅಲೆಯಲ್ಲಿ 
ಉಳಿಯದೇ ಹೋದವು 
ಮತ್ತೆ ಹೆಜ್ಜೆ ಮೂಡಿಸುವ ಆತುರದಲ್ಲಿ 
ಹುಟ್ಟಿದಾ ಹೆಜ್ಜೆಯ ಗುರುತು ಉಳಿಯದಂತೆ....!ಇಷ್ಟವೆಂಬ ಕಷ್ಟಗಳಿಗೆ 
ಮಣೆ ಹಾಕುತ್ತ ಹೊರಟೆ 
ಏರಿದರೇನು ಸುಖ 
ತುತ್ತ ತುದಿಯಲ್ಲೂ ಹುಡುಕಿದೆ 
ಕೊನೆಗೂ ಕಾಣದಾದೆ 
ನನ್ನ ಇಷ್ಟವೆಂಬ ಇಷ್ಟಗಳ......!!!ಹರಿವ ಕಾಲುವೆಯಲಿ 
ಮಣ್ಣಾಗಿ ಉಳಿದಿಹೆ 
ಗುಬ್ಬಚ್ಚಿ ಗೂಡಿನ ನೆನಪು 
ಒಂದಷ್ಟು ಖುಷಿಗಳ ಹೊತ್ತು ಕುಳಿತು 
ನಾ ಇಟ್ಟ ಹೆಜ್ಜೆಗಳ ನೆನಪಿಸುತ್ತಾಯುದ್ಧಕ್ಕೆ ನಿಲ್ಲದಿರು ಮನವೆ 
ಏಕಿಷ್ಟು ಹವಣಿಕೆ...!! 
ಸೋತಿಹೆನು ಎಂದೋ 
ಕಳೆದುಕೊಂಡ ಭರದಲ್ಲಿ 
ಬಾಗಿ ಕುಳಿತಿರುವೆ 
ಒಂದಷ್ಟು ಸೋಲುಗಳ ಭಾರದಲ್ಲಿ

No comments:

Post a Comment