Sunday 21 April 2013


ಹಸಿವು... 

ಹೇಳದೆ ಉಳಿದಿತ್ತು ಒಂದಷ್ಟು ಹಸಿವು 
ಮತೊಬ್ಬರ ಸ್ನೇಹ ಕಂಡಾಗ 
ಅವಳ ಸ್ನೇಹದ ಕ್ಷಣಗಳು ನೆನಪಾಗಿ 
ರಮಿಸಿ ನಿಲ್ಲುತ್ತಿತ್ತು..... 
----------------------------------------------------------------------------------------------------------------------------
ನಿದ್ರೆ..... 

ಅವಳು ಬರೆದಿದ್ದ ಒಂದಷ್ಟು 
ಪ್ರೇಮ ಪತ್ರಗಳು
ಮುದುಡಿ ಮಲಗಿದ್ದವು ಪೆಟ್ಟಿಗೆಯಲ್ಲಿ 
ಇವನು ಇಟ್ಟಿದ್ದ ಹಣದ ಕಂತೆಯ ಕೆಳಗೆ 
---------------------------------------------------------------------------------------------------------------------------
ಪ್ರೀತಿ ..... 

ಅವಳ ಪ್ರೀತಿ ಸವಿದೆನೆಂದ ಬೆಳದಿಂಗಳ ರಾತ್ರಿಯಲಿ 
ಅಮ್ಮನ ನೆನಪಾಗಿ ಕಣ್ಣಿರಿಟ್ಟಾಗ 
ಅವಳು ತುತ್ತು ಮಾಡಿ 
ಹುಣ್ಣಿಮೆಯ ಚಂದ್ರನ 
ತೋರಿಸಿ ತಿನ್ನಿಸಿದಾ ತುತ್ತುಗಳ ನೆನಪಾಗಿ.... 
--------------------------------------------------------------------------------------------------------------------------

ಸವಾಲು 

ಸವಾಲು ಒಡ್ಡಿ ನಿಂತಿರುವೆ
ನಡು ರಾತ್ರಿಯಲಿ
ನಿನ್ನ ಸವಿ ಸ್ನೇಹದ ಕ್ಷಣಗಳ
ಕನಸಲ್ಲಿ ನೆನೆಸುತ್ತ
 

2 comments:

  1. ಪ್ರೀತಿ .....

    ಅವಳ ಪ್ರೀತಿ ಸವಿದೆನೆಂದ ಬೆಳದಿಂಗಳ ರಾತ್ರಿಯಲಿ
    ಅಮ್ಮನ ನೆನಪಾಗಿ ಕಣ್ಣಿರಿಟ್ಟಾಗ
    ಅವಳು ತುತ್ತು ಮಾಡಿ
    ಹುಣ್ಣಿಮೆಯ ಚಂದ್ರನ
    ತೋರಿಸಿ ತಿನ್ನಿಸಿದಾ ತುತ್ತುಗಳ ನೆನಪಾಗಿ....

    ಅಮ್ಮನ ಪ್ರೇಮ, ಪ್ರೀತಿ ಯನ್ನು ಮಡದಿ ಓಡಿಲಲ್ಲಿ ಕಂಡ ಪರಿ ತುಂಬಾ ಚೆನ್ನಾಗಿದೆ,
    ನಿಜ ಅಮ್ಮನ ಮತ್ತೆ ಮಡದಿಯ ಬಳಿಯಲ್ಲೆ ಕಾಣಲು ಸಾದ್ಯ ...

    ReplyDelete
  2. ಚೆನ್ನಾಗಿದೆ ಹನಿಗವನಗಳು ಬಿಂದಿಯಾರವರೇ :-)
    ಸತ್ತಾರ್ ಭಾಯ್ ಅವರ ತಿದ್ದುಪಡಿಯಂತೆ ಬ್ಲಾಗಲ್ಲಿ ಅಳವಡಿಸಿಕೊಂಡ ನಿಮ್ಮ ವಿನಯವೂ ಇಷ್ಟವಾಯಿತು :-)

    ReplyDelete