Friday 15 March 2013

ಅಕ್ಷರ ರೂಪ




ಪೇಟೆಯಿಂದ ಹಳ್ಳಿಯ ಮನೆಗೆ ಬಂದಿದ್ದ ಮಗಳ ಮಗನನ್ನು .. ಮನೆಯಲ್ಲೇ ಇದ್ದ ಮಗನ ಮಗನನ್ನು ಜೊತೆಯಲ್ಲಿ ಕರೆದುಕೊಂಡು ತೋಟಕ್ಕೆ ಸುತ್ತಾಡಿ ಬರಲು ಹೊರಟ.... ಮಗಳ ಮಗನ ಮೇಲೆ ಸ್ವಲ್ಪ ಪ್ರೀತಿ ಹೆಚ್ಚಿದ್ದ ಕಾರಣ ಅಜ್ಜ ಮಗಳ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು.. ಮಗನ ಮಗನನ್ನು ಕೈ ಹಿಡಿದು ನಡೆಸಿಕೊಂಡು ಹೊರಟ....
ತೋಟದ ಒಂದು ಭಾಗದಲ್ಲಿ ಬೇರೆ ತೋಟದ ಒಂದು ಹಸು ಮುಳ್ಳಿನ ಬೇಲಿ ದಾಟಿ ಹೊಲದಲ್ಲಿ ಗಿಡ ಮೇಯುತಿತ್ತು.... ಅದನ್ನು ನೋಡಿದ ಹೆಗಲ ಮೇಲಿದ್ದ ಮಗಳ ಮಗ "ತಾತ ನಿಮ್ಮ ಹೊಲದಲ್ಲಿ ಯಾವ್ದೋ ಬೇರೆ ಹಸು ಬಂದಿದೆ......" ಅಂತ ಕೂಗ್ತಾನೆ...
ಅದೇ ಸಮಯಕ್ಕೆ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು ನಡೆದು ಬರುತಿದ್ದ ಮಗನ ಮಗ "ತಾತ ನಮ್ಮ ಹೊಲದಲ್ಲಿ ಯಾವ್ದೋ ಬೇರೆ ಹಸು ಬಂದಿದೆ...." ಅಂತ ಕೂಗ್ತಾನೆ....
ತಕ್ಷಣ ಅಜ್ಜ ಮಗಳ ಮಗನನ್ನು ಕೆಳಗೆ ಇಳಿಸಿ ಮಗನ ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಮುಂದೆ ಸಾಗಿದ...

ಪ್ರೀತಿಯ ಸಾಲು...





ಅವಳಿಗೆ ಹೇಳಬೇಕೆಂದು ಪೊಣಿಸಿಟ್ಟಿದ್ದ ಒಂದಷ್ಟು ಮಾತುಗಳು ಹೇಳದೆ ಉಳಿದವು....,
ಅವಳು ಮತ್ತೊಬ್ಬನ ಹೃದಯದ ಮಾತುಗಳನ್ನ ಆಲಿಸಿದಳೆಂದು ತಿಳಿದಾಗ.........

ತನ್ನದೇ ಚೌಕಟ್ಟು ಎಂದು ನಿರ್ಮಿಸಿಕೊಂಡ ಗೋಡೆಯನ್ನು 
ತಾನೆ ಕೆಡವಿದಳು ಆಚೆಯಿಂದ ಕೂಗಿದ ಅವನ ಪ್ರೀತಿಯ ದನಿಗೆ....

ತಾನು ಪ್ರೀತಿಸಿದವಳು ಗೋರಿ ಸೇರಿದಳೆಂದು ತಿ.ಳಿದಾಕ್ಷಣ 
ಅವನ ಮನದಲ್ಲಿನ ಅವಳ ಪ್ರೀತಿ ಮತ್ತು ನೆನಪುಗಳು ಉಸಿರಾಡಿದವು......

ರಕ್ತದಲ್ಲಿ ಬರೆದುಕೊಟ್ಟ ಪ್ರೇಮ ಪತ್ರಕ್ಕೆ ಬೈದವಳು...... 
ಅವನೇ ರಕ್ತವಾಗಿ ಹರಿದಾಗ ಮೌನ ತಾಳಿದಳು......

ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ 
ಅವಳ ಮುಂದೆಯೇ ನಿಲ್ಲುವಂತೆ ಮಾಡಿತ್ತು ಎಲ್ಲೋ ಅಡಗಿದ್ದ ಅವಳ ನೆನಪು........

Friday 1 March 2013



ತನ್ನ ಪ್ರೀತಿಸಿದ ಹೃದಯವನ್ನು
ಬಡಿದೆಬ್ಬಿಸಲು ಹೊರಟವಳು
ತಾನೆ ಶವವಾಗಿ ಕಂಡಳು ತನ್ನನ್ನು
ಪ್ರೀತಿಸಿದ ಹೃದಯಗಳಿಗೆ

ದೃಷ್ಟಿಬೊಟ್ಟು ...........


ಅಮ್ಮ ಇಡುವಳು ತನ್ನ
ಕಂದನಿಗೆ ಕಪ್ಪು ಚುಕ್ಕಿಯನು 
ದೃಷ್ಟಿಯಾಗದಿರಲೆಂದು 
ದೇವರಿಟ್ಟಿಹನು ನಿನ್ನನು ಆಕಾಶಕ್ಕೆ 
ಬಿಳಿಯ ಚುಕ್ಕಿಯಾಗಿ
ಎಲ್ಲರ ದೃಷ್ಟಿ ನಿನ್ನ ಮೇಲಿರಲೆಂದು